ಕೋನೇರು ಹಂಪಿ ಒಬ್ಬ ಚದುರಂಗ ಆಟಗಾರ್ತಿ. ಅವರು ೩೧ ಮಾರ್ಚ್ ೧೯೮೭ ರಂದು ಆಂಧ್ರ ಪ್ರದೇಶದ ಗುಡಿವಾಡದಲ್ಲಿ ಜನಿಸಿದರು. . ಆಕೆ ಅಕ್ಟೋಬರ್ ೨೦೦೭ರಲ್ಲಿ ಭಾರತದ ಚೆಸ್ ಗ್ರಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದರು. ಆಕೆ ೨೬೦೦ ಎಲೊ ರ್‍ಯಾಂಕಿಂಗ್ ಪಡೆದು ಜುಡಿತ್ ಪೊಲ್ಗಾರ್ ನಂತರ ಇಷ್ಟು ಅಂಕ ಪಡೆದ ದ್ವಿತೀಯ ಮಹಿಳಾ ಚೆಸ್ ಆಟಗಾರ್ತಿ ಆದರು. ಕೋನೇರು ಹಂಪಿಯವರು ೨೦೦೨ರಲ್ಲಿ ಅತಿ ಕಿರಿಯ ವಯಸ್ಸಿನ ಮಹಿಳಾ ಗ್ರಾಂಡ್‍ಮಾಸ್ಟರ್ (ಏಕೈಕ ಮಹಿಳಳಾ ಗ್ರಾಂಡ್‍ಮಾಸ್ಟರ್) ಆದರು. ಆಗ ಆಕೆಯ ವಯಸ್ಸು ೧೫ವರ್ಷ, ೧ ತಿಂಗಳು, ೨೭ ದಿನಗಳಾಗಿತ್ತು, ಇದಕ್ಕೆ ಮೊದಲು ಈ ದಾಖಲೆ ಜುಡಿತ್ ಪೊಲ್ಗಾರ್ ಅವರ ಹೆಸರಿನಲ್ಲಿತ್ತು.. ಹೌವ್ ಯಿಫಾನ್ ಅವರು ಈ ದಾಖಲೆಯನ್ನು ೨೦೦೮ರಲ್ಲಿ ಮುರಿದರು. == ವೈಯಕ್ತಿಕ ಜೀವನ == ಅವರ ಪೋಷಕರು ಕೋನೇರು ಅಶೋಕ್ ಮತ್ತು ಶ್ರೀಮತಿ ಲತಾ ಅಶೋಕ್. ಚಾಂಪಿಯನ್ ಎಂಬ ಅರ್ಥ ಬರುವಂತೆ ಆಕೆಗೆ ಹಂಪಿ ಎಂದು ಹೆಸರಿಡಲಾಯಿತು. ಇದು ರಶಿಯನ್ ಹೆಸರಿಗೆ ನಿಕಟವಾಗಿ ಹೋಲುವ ಹೆಸರು. ಆಗಸ್ಟ್ ೨೦೧೪ರಲ್ಲಿ ಅವರ ಮದುವೆಯಾಯಿತು. ಪತಿಯ ಹೆಸರು ದಾಸರಿ ಅನ್ವೆಶ್. ಪ್ರಸ್ತುತ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ. == ಸಾಧನೆಗಳು == ಕೋನೇರು ಹಂಪಿಯವರು ಭಾಗವಹಿಸಿದ ಮಹಿಳಾ ಗ್ರಾಂಡ್ ಫ್ರೀ ೨೦೦೯-೨೦೧೧ ರಲ್ಲಿ ಅಂತಿಮವಾಗಿ ಎರಡನೇ ಸ್ಥಾನವನ್ನು ಪಡೆದು ವಿಶ್ವ ಮಹಿಳಾ ಚೆಸ್ ಚಾಂಪಿಯನ್ಷಿಪ್ ೨೦೧೧ರಲ್ಲಿ ಆಡುವ ಅರ್ಹತೆ ಪಡೆದರು. ಅದರಲ್ಲಿ ಹೌವ್ ಯಿಫಾನ್ ಜಯ ಸಾಧಿಸಿದರು. ಹಂಪಿಯವರು ದ್ವಿತೀಯ ಸ್ಥಾನ ಪಡೆದರು. ಅವರು ಚೀನಾದ ಚೆಂಗ್ಡುವಿನಲ್ಲಿ ೨೦೧೫ರಲ್ಲಿ ನಡೆದ ವಿಶ್ವ ಮಹಿಳಾ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ವೈಯಕ್ತಿಕ ಕಂಚಿನ ಪದಕ ಪಡೆದರು. ಅದರಲ್ಲಿ ಭಾರತೀಯ ತಂಡ ನಾಲ್ಕನೇ ಸ್ಥಾನ ಪಡೆಯಿತು. == ಪ್ರಶಸ್ತಿ ಮತ್ತು ಸಾಧನೆ == == ರಾಯಭಾರಿ == ಸ್ವಚ್ಛ ಭಾರತ ಆಂದೋಲನದ ಬ್ರ್ಯಾಂಡ್‌ ರಾಯಭಾರಿ == ಉಲ್ಲೇಖ == == ಬಾಹ್ಯ ಕೊಂಡಿ == ಚೆಸ್ ಗೇಮ್ಸ್ 365Chess. ಚದುರಂಗ ಆಟ (1997-2000) 365Chess. |=49497Chessgames. ಸಂದರ್ಶನ ಮೂಲಕ . ://../.?=4318%7Ctitle= - |=12 2007|= |=